ಅಂತರದರ್ಶಕ ಗರ್ಭಕೋಶ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಹಾಸನ
ಹಾಸನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ ಮತ್ತು ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ “ಸಂಪೂರ್ಣ ಅಂತರ್ದಶಕ ಗರ್ಭಕೋಶ ಶಸ್ತ್ರಚಿಕಿತ್ಸೆ ಕಾರ್ಯಾಗಾರವನ್ನು ದಿ.25.09.2016 ರಂದು ಮಣಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿತು.್ತ
ಬೆಂಗಳೂರಿನ ರಾಧಾಕೃಷ್ಣ ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞೆ ಡಾ. ವಿದ್ಯಾ ಭಟ್ ಹಾಗೂ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಪರಿಮಳ ದೇವಿರವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು ಶಿಬಿರದಲ್ಲಿ ಅರಿವಳಿಕೆ ತಜ್ಞರಾಗಿ ಡಾ. ಜೆ. ಕೆ. ಯತೀಶ್ ಕುಮಾರ್, ಡಾ. ಮಮತಾ. ಎನ್. ಆರ್ ಮತ್ತು ಡಾ. ಡಿ ಎಸ್ ವಿಜಯಕುಮಾರ್ ಭಾಗವಹಿಸಿದ್ದರು. ನೇರ ದೃಶ್ಯ-ಶ್ರಾವ್ಯ ಕಾರ್ಯಾಗಾರದಲ್ಲಿ ಹಾಸನ, ತುಮಕೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಂದ 25 ಕ್ಕೂ ಹೆಚ್ಚು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ವೈದ್ಯರುಗಳು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು. ಸ್ತ್ರೀರೋಗ ಹಾಗೂ ಉದರದರ್ಶಕ ಶಸ್ತ್ರಚಿಕಿತ್ಸೆ ತಜ್ಞೆ ಡಾ. ಬಿ.ಕೆ. ಸೌಮ್ಯಮಣಿರವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹಾಸನ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷರಾದ ಡಾ. ಎಸ್ ರಮೇಶ್ಬಾಬು ರವರು ಅಧ್ಯಕ್ಷತೆ ವಹಿಸಿದ್ದರು ಹಾಗೂ ಸ್ತ್ರೀರೋಗ ತಜ್ಞರಾದ ಡಾ. ಎನ್. ಬಿ. ಶ್ರೀವಿದ್ಯಾರವರು ಕಾರ್ಯಕ್ರಮ ನಿರೂಪಿಸಿದರು.








Leave a Reply