ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನಾಷ್ಯನಲ್ ಫೌಂಡೇಷನ್ ವತಿಯಿಂದ ಆರೋಗ್ಯೋತ್ಸವ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ದಿನಾಂಕ 31/05/2018 ಆಯೋಜಿಸಲಾಗಿತ್ತು. ಸಂಸ್ಥೆಯ 12 ನೇ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ವೃಕ್ಷಮಾತೆ ನಾಡೋಜ ಡಾ. ಸಾಲುಮರದ ತಿಮ್ಮಕ್ಕನವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪರಿಸರ ದಿನಾಚರಣೆಯ ಸಲುವಾಗಿ 2000 ಉಚಿತ ಸಸಿಗಳನ್ನು ಹಾಗೂ ವಿವಿಧ ಜಾತಿಯ ಬೀಜಗಳನ್ನು ವಿತರಿಸಲಾಯಿತು. ಇದೇ ಸಮಯದಲ್ಲಿ ನಮ್ಮ ಸಂಸ್ಥೆಯ ಗರ್ಭಿಣಿಯರ ತೀವ್ರನಿಗಾ ಘಟಕವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ ಜೆ ಕೆ ಯತೀಶ್ ಕುಮಾರ್, ವೈದ್ಯಕೀಯ ನಿರ್ದೇಶಕಿ ಡಾ ಬಿ ಕೆ ಸೌಮ್ಯಮಣಿ, 2018 ನೇ ಸಾಲಿನ ಐ.ಎಂ.ಎ ಹಾಸನ ಘಟಕದ ಅಧ್ಯಕ್ಷರಾ ಡಾ ನಾಗೇಶ್ ಕಲ್ಲೇನಹಳ್ಳಿ, ಪರಿಸರ ಪ್ರಶಸ್ತಿ ವಿಜೇತ ಡಾ ಉಮೇಶ್ ಬಳ್ಳೂರು, ಹಿರಿಯ ಶಸ್ತ್ರ ಚಿಕಕತ್ಸಕರಾದ ಡಾ ಲಿಂಗರಾಜು, ರೋಟರಿ ಮಿಡ್ ಟೌನ್ ಅಧ್ಯಕರಾದ ರೊ. ಶ್ರೀ ಶಿವಕುಮಾರ್ ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂಧಿ ವರ್ಗ ಹಾಜರಿದ್ದರು.
















Leave a Reply