Children’s day 2020

Children’s day 2020

ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ.

ಶನಿವಾರ 14 ರಂದು ಮಣಿ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ನೆಚ್ಚಿನ ನಿರ್ದೇಶಕರಾದ ಡಾ ಜೆ ಕೆ ಯತೀಶ್ ಕುಮಾರ್ ರವರ ಹುಟ್ಟು ಹಬ್ಬ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ಕೇಕ್ ಕತ್ತರಿಸಿ ಮಕ್ಕಳಿಗೆ ಶುಭ ಹಾರೈಸಲಾಯಿತು. ಮಕ್ಕಳಿಗಾಗಿ ಚಿತ್ರಕಲಾ ಚಟುವಟಿಕೆಗಳನ್ನು ಏರ್ಪಡಿಸಿ ಉಡುಗೊರೆಗಳನ್ನು ವಿತರಿಸಲಾಯಿತು. ಸಂಸ್ಥೆಯ ಮಕ್ಕಳ ತಜ್ಞ ಡಾ ದಿನೇಶ್ ಮಕ್ಕಳಿಗೆ ಮತ್ತು ಹಾಜರಿದ್ದ ಸಾರ್ವಜಿಕರಿಗೆ ಆರೋಗ್ಯ ಸಲಹೆಗಳನ್ನು ನೀಡಿದರು. ಸಂಸ್ಥೆಯ ವೈದ್ಯಕೀಯ ನಿರ್ದೇಶಕಿ ಡಾ ಬಿ ಕೆ ಸೌಮ್ಯಮಣಿ, ರೋಟರಿ 3182 ಅಸಿಸ್ಟೆಂಟ್ ಗವರ್ನರ್ ರೊ ಪಾಲಾಕ್ಷ, ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ರೊ ಡಾ ವಾಣಿ ನಾಗೇಶ್, ಸದಸ್ಯರುಗಳಾದ ರೊ ಡಾ ನಾಗೇಶ್, ರೊ ಡಾ ಮಮತಾ ಸುಧೀರ್, ಸಂಸ್ಥೆಯ ಸಹವೈದ್ಯರಾದ ಡಾ ಬಿಂಬ ಶಶಿಕಿರಣ್ ಮಕ್ಕಳಿಗೆ ಉಡುಗೊರೆ ಮತ್ತು ಸಿಹಿ ಹಂಚಿ ಶುಭ ಹಾರೈಸಿದರು.

Leave a Reply

Your email address will not be published.