ಮಾನಸಿಕ ಒತ್ತಡ ನಿರ್ವಹಣೆಗಾಗಿ ಬಯೋಫೀಡ್ ಬ್ಯಾಕ್ ಚಿಕಿತ್ಸೆ :
ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ರೋಟರಿ ಮಿಡ್ ಟೌನ್ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 15/10/16 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಬಯೋಫೀಡ್ ಬ್ಯಾಕ್ ಚಿಕಿತ್ಸೆಯ ಉದ್ಘಾಟನೆಯನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ರಾವ್ ರವರು ಗಿಡ ನೆಡುವುದರೊಂದಿಗೆ ಬಯೋಫೀಡ್ ಬ್ಯಾಕ್ ಚಿಕಿತ್ಸೆ ಹಾಗೂ ಮಾನಸಿಕ ಆರೋಗ್ಯ ತಪಾಸಣ ಶಿಬಿರಕ್ಕೆ ಚಾಲನೆ ನೀಡಿದರು ಇನ್ನೋರ್ವ ಮುಖ್ಯ ಅತಿಥಿಗಳಾದ ಎಸ್.ಡಿ.ಎಂ ಕಾಲೇಜಿನ ಮಕ್ಕಳ ತಜ್ಞೆ ಡಾ. ಶೈಲಜಾ ರಾವ್ ರವರು ಸಭೆಯನ್ನು ಕುರಿತು ಮಾನಸಿಕ ಒತ್ತಡದ ಪರಿಣಾಮಗಳ ಬಗ್ಗೆ ಮಾತನಾಡಿದರು. ಮಾನಸಿಕ ವೈದ್ಯರಾ ಡಾ. ಸುನೀತಾ ಕೆ. ಎಸ್ ರವರು ಮಾತನಾಡಿ ಮಾನಸಿಕ ಪ್ರಥಮ ಚಿಕಿತ್ಸೆ ಹಾಗೂ ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಬಯೋಫೀಡ್ ಬ್ಯಾಕ್ ಚಿಕಿತ್ಸೆಯ ಪಾತ್ರವನ್ನು ವಿವರಿಸಿದರು ಹಾಗೂ ದಿನಾಂಕ 15/10/16 ರಿಂದ 22/10/16 ರವರೆಗೆ ಮಾನಸಿಕ ಆರೋಗ್ಯ ಸಪ್ತಾಹವಾಗಿ ಆಚರಿಸಲಾಗುತ್ತಿದ್ದು ಈ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ನಿರ್ದೇಶಕರಾದ ಡಾ. ಜೆ ಕೆ ಯತೀಶ್ ಕುಮಾರ್ ರವರು ವಹಿಸಿ ಮಾತನಾಡುತ್ತಾ ಮಾನಸಿಕ ಒತ್ತಡಕ್ಕೆ ಇರುವ ನೂರಾರು ಕಾರಣಗಳ ಬಗ್ಗೆ ವಿಶ್ಲೇಷಿಸಿ ಲಭ್ಯವಿರುವ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.
ರೋಟರಿ ಮಿಡ್ ಟೌನ್ ಹಾಸನದ ಅಧ್ಯಕ್ಷರಾದ ಶ್ರೀ ದಯಾನಂದ್ ಹಾಗೂ ಆಸ್ಪತ್ರೆಯ ವೈದ್ಯರಾದ ಡಾ. ಸಿದ್ದರಾಮುರವರು ಉಪಸ್ಥಿತರಿದ್ದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿಯಾದ ಡಾ. ಬಿ ಕೆ ಸೌಮ್ಯಮಣಿರವರು ಕಾರ್ಯಕ್ರಮ ನಿರೂಪಿಸಿದರು.

Leave a Reply