ಪ್ರಕಟಣೆಯ ಕೃಪೆಗಾಗಿ,
ಮಣಿ ಆಸ್ಪತ್ರೆಯಲ್ಲಿ ಜಠg,À ಲಿವರ್ ಮತ್ತು ಕರುಳಿನ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾರಂಭೋತ್ಸವ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ.
ನಗರದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ದಿನಾಂಕ 25/03/16ರಂದು ಅತ್ಯಾಧುನಿಕ ಉಪಕರಣಗಳುಳ್ಳ ಸುಸಜ್ಜಿತ ಜಠರ, ಲಿವರ್ ಮತ್ತು ಕರುಳಿನ ಶಸ್ತ್ರಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಲಾಯಿತು, ಹಿರಿಯ ಶಸ್ತ್ರಚಿಕಿತ್ಸಕರಾದ ಡಾ.ಲಿಂಗರಾಜು ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮಾತನಾಡಿ ಜಿಲ್ಲಾ ಮತ್ತು ಸ್ಥಳೀಯ ಮಟ್ಟದಲ್ಲಿ ಗುಣಮಟ್ಟದ ಹೆಚ್ಚುವರಿ ಆರೋಗ್ಯ ಸೌಲಭ್ಯಗಳು ದೊರೆಯುತ್ತಿರುವುದನ್ನು ಶ್ಲಾಘಿಸಿದರು, ಹಿರಿಯ ಶಸ್ತ್ರಚಿಕಿತ್ಸಕರಾದ ಡಾ.ಕೃಷ್ಣಮೂರ್ತಿಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಾಮಾನ್ಯ ಜನರಿಗೂ ಸಹ ಕೈಗೆಟಕುವ ದರದಲ್ಲಿ ಉತ್ತಮ ವೈದ್ಯಕೀಯ ಸೇವೆಗಳು ಸ್ಥಳೀಯವಾಗಿ ಲಭ್ಯವಿದ್ದು ಜನರು ದೊಡ್ಡ ದೊಡ್ಡ ನಗರಗಳನ್ನು ಅರಸಿ ಹೋಗದೇ ತಮ್ಮ ನಗರಗಳಲ್ಲಿಯೇ ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು. ಆಸ್ಪತ್ರೆಯ ಜಠg,À ಲಿವರ್ ಮತ್ತು ಕರುಳಿನ ಶಸ್ತ್ರಚಿಕಿತ್ಸಕರಾದ ಡಾ.ಸಿದ್ದರಾಮುರವರು ಮಾತನಾಡಿ ಎಂಡೋಸ್ಕೋಪ್ ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು, ರೋಗದ ಲಕ್ಷಣಗಳು ಕಂಡಕೂಡಲೇ ನಿರ್ಲಕ್ಷಿಸದೇ ವೈದ್ಯರಿಂದ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ರಕ್ಷಿಸಿಕೊಳ್ಳುವಂತೆ ತಿಳಿಹೇಳಿದರು ಮತ್ತು ವಿಭಾಗದ ಪ್ರಾರಂಭೋತ್ಸವದ ಅಂಗವಾಗಿ ದಿನಾಂಕ 25/3/16 ರಿಂದ 31/3/16 ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು, ಆಸ್ಪತ್ರೆಯ ನಿರ್ದೇಶಕರಾದ ಡಾ,ಯತೀಶ್ ಕುಮಾರ್ ಹಾಗೂ ಭಾರತೀಯ ವೈದ್ಯಕೀಯ ಸಂಘ ಹಾಸನ ಶಾಖೆಯ ಅಧ್ಯಕ್ಷರಾದ ಡಾ.ದೇವಪ್ರಸಾದ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ.ಸೌಮ್ಯಮಣಿ ನಿರೂಪಿಸಿದರು, ಮಕ್ಕಳ ತಜ್ಞ ಡಾ. ದಿನೇಶ್ ವಂದಿಸಿದರು.
ಇನ್ನುಳಿದಂತೆ ವೈದ್ಯರುಗಳಾದ ಡಾ. ಸುರೇಂದ್ರಬಾಬು, ಡಾ.ಮಂಜುನಾಥ್, ಡಾ.ಸುನೀತ, ಡಾ.ಶ್ರೀವಿದ್ಯಾ, ಡಾ.ಗಝಾಲ ಮತ್ತು ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.

Leave a Reply