Live Operative Workshop on Urogynaecology and Pelvic Floor Surgery

Live Operative Workshop on Urogynaecology and Pelvic Floor Surgery

ಯಶಸ್ವಿ ಸ್ತ್ರೀ ಮೂತ್ರರೋಗ ನೈಜ ಶಸ್ತ್ರಚಿಕಿತ್ಸಾಗಾರ

“16 ರಿಂದ 60 ವಯಸ್ಸಿನ ಹೆಂಗಸರ ಗರ್ಭಕೋಶವನ್ನು ಉಳಿಸಲು ದೇಶದ ಸ್ತ್ರೀರೋಗ ಶಸ್ತ್ರ ಚಿಕಿತ್ಸಕರು ಶ್ರಮಿಸಬೇಕು” ಈಗಿನ ವಿಶ್ವ ಈ ದೆಸೆಯಲ್ಲಿ ಭಾರತದ ಕಡೆ ನೋಡುತ್ತಿದೆ. ಗರ್ಭಕೋಶ ಉಳಿಸುವ ಕಲೆ ಕರಗತ ಮಾಡಿಕೊಳ್ಳಲು ಶ್ರಮಿಸಿ ಎಂದು ಖ್ಯಾತ ಸ್ತ್ರೀ ಮೂತ್ರರೋಗ ನೈಜ ಶಸ್ತ್ರಚಿಕಿತ್ಸಕರಾದ ಡಾ. ಕಿರಣ್ಅಶೋಕ್ ತಿಳಿಸಿದರು.

ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತುಸಂಶೋಧನಾ ಸಂಸ್ಥೆಯಲ್ಲಿ ಹಾಸನದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ನರ ಸಂಘ ಮತ್ತು ಕರ್ನಾಟಕ ರಾಜ್ಯ ಸ್ತ್ರೀಮೂತ್ರ ರೋಗ ತಜ್ನರ ವತಿಯಿಂದ ನಡೆದ ಸ್ತ್ರೀ ಮೂತ್ರರೋಗ ನೈಜ ಶಸ್ತ್ರಚಿಕಿತ್ಸಾಗಾರದಲ್ಲಿ ಉಪನ್ಯಾಸನೀಡುತ್ತಾ ಈ ವಿಷಯ ತಿಳಿಸಿದರು ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವೆಂಕಟೇಶ್ ಉದ್ಘಾಟಿಸಿ, ಹಾಸನದಲ್ಲಿ ನಡೆಯುತ್ತಿರುವ ಈ ನೈಜ ಶಸ್ತ್ರಚಿಕಿತ್ಸಾಗಾರ ತುಂಬಾ ಜನ ಸ್ತ್ರೀರೋಗ ತಜ್ನರಿಗೆ ಉಪಯೋಗವಾಗಲಿದೆಈ ರೀತಿ ಇನ್ನೂ ಹೆಚ್ಚಿನ ಕಾರ್ಯಾಗಾರಗಳು ನಡೆಯಲಿ ಎಂದು ಶುಭಾರೈಸಿದರು ಸಭೆಯ ಅಧ್ಯಕ್ಶತೆಯನ್ನು ಹಾಸನ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ನರ ಸಂಘದ ಅಧ್ಯಕ್ಶರಾದ ಡಾ.T.S. ಲಕ್ಶ್ಮೀಕಾಂತ್ ವಹಿಸಿದ್ದರು. ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಡಾ.ಬಿ.ಕೆ ಸೌಮ್ಯಮಣಿ ಹಾಗೂ ಹಾಸನ ಜಿಲ್ಲಾ ಅರಿವಳಿಕೆ ತಜ್ನ ವೈದ್ಯರ ಸಂಘದ ಕಾರ್ಯದರ್ಶಿ ಡಾ.ಜೆ.ಕೆ.ಯತೀಶ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಕರ್ನಾಟಕ ರಾಜ್ಯ ಸ್ತ್ರೀಮೂತ್ರ ರೋಗ ತಜ್ನ ವೈದ್ಯರ ಸಂಘದ ಅಧ್ಯಕ್ಶರಾದ ಡಾ. ಚಂದ್ರಶೇಖರ ಮೂರ್ತಿ ಹಾಗೂ ಡಾ.ಕಿರಣ್ ಅಶೋಕ್ ಹಾಗೂ ದಾವಣಗೆರೆಯ ಖ್ಯಾತ ಸ್ತ್ರೀರೋಗ ತಜ್ನರಾದ ಡಾ.ಎಂ.ಎಂ. ವಿಜಯಕುಮಾರ್ಕಾರ್ಯಾಗಾರವನ್ನು ನಡೆಸಿಕೊಟ್ಟರು ಕಾರ್ಯಕ್ರಮವನ್ನು ಅರಿವಳಿಕೆ ತಜ್ನ ಡಾ.ಡಿ.ಎಸ್ .ವಿಜಯಕುಮಾರ್ನಿ ರೂಪಿಸಿದರು. ಹಾಸನ, ಚಿಕ್ಕಮಗಳೂರು, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳ 85 ಜನಕ್ಕೂ ಹೆಚ್ಚು ವೈದ್ಯರು ಭಾಗವಹಿಸಿ ಅನುಭವ ಹಂಚಿಕೊಂಡರು.ಹಾಸನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ನರ ಸಂಘದ ಕಾರ್ಯದರ್ಶಿ ಡಾ.ಪಿ ನಾಗರಾಜ ವಂದಿಸಿದರು.

Leave a Reply

Your email address will not be published.