Preterm week NICU

Preterm week NICU

ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಡ್ರೀಂ ಟೀಂ ವತಿಯಿಂದ ಅಂತರರಾಷ್ಟ್ರೀಯ ಅವಧಿ ಪೂರ್ವ ಶಿಶು ಜನನ ಸಪ್ತಾಹವನ್ನು ದಿನಾಂಕ 14/11/17 ರಿಂದ 21/11/2017 ಆಯೋಜಿಸಲಾಗಿತ್ತು. ಅವಧಿ ಪೂರ್ವ ಶಿಶು ಜನನ ಮತ್ತು ನವಜಾತ ಶಿಶುಗಳ ಪಾಲನೆ ಪೋಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಸಪ್ತಾಹದ ಉದ್ದೇಶವಾಗಿತ್ತು. ದಿನಾಂಕ 12/11/17 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಹಾಸನ ಅಂದಿನ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಶ್ರೀ ಹೆಚ್ ಎಸ್ ಪ್ರಕಾಶ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾಗಿದ್ದ ಡಾ ಆರ್ ವೆಂಕಟೇಶ್, ಆರ್ ಸಿ ಹೆಚ್ ಅಧಿಕಾರಿಗಳಾಗಿದ್ದ ಡಾ ಹೆಚ್ ಎಲ್ ಜನಾರ್ಧನ್. ಐ.ಎಂ.ಎ ಹಾಸನ ಘಟಕದ ಅಧ್ಯಕ್ಷರಾಗಿದ್ದ ಡಾ ನಾಗೇಶ್ ಕಲ್ಲೇನಹಳ್ಳಿ, ಭಾರತೀಯ ಮಕ್ಕಳ ತಜ್ಞರ ಸಂಘ ಹಾಸನ ಶಾಖೆಯ ಅಧ್ಯಕ್ಷರಾಗಿದ್ದ ಡಾ ಲಕ್ಷ್ಮೀಕಾಂತ್ ಹಾಗೂ ಆಸ್ಪತ್ರೆಯ ನಿರ್ದೇಶಕರಾದ ಡಾ ಯತೀಶ್ ಕುಮಾರ್ ಮತ್ತು ವೈದ್ಯಕೀಯ ನಿರ್ದೇಶಕರಾದ ಡಾ ಬಿ ಕೆ ಸೌಮ್ಯಮಣಿ ಹಾಗೂ ಸಂಸ್ಥೆಯ ಸಹ ವೈದ್ಯರುಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ ಅವಧಿ ಪೂರ್ವ ಜನನದ ಚಿಕಿತ್ಸೆ ಪಡೆದಿದ್ದ ಮಕ್ಕಳು ಮತ್ತು ಪೋಷಕರು ಹಾಜರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹಾಜರಿದ್ದ ಎಲ್ಲಾ ಮಕ್ಕಳಿಗೂ ಸಹ ಉಡುಗೊರಗಳನ್ನು ವಿತರಿಸಲಾಯಿತು.

Leave a Reply

Your email address will not be published.