ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ವಿನೂತನ ಸಾಮೂಹಿಕ ಸೀಮಂತ ಕಾರ್ಯಕ್ರಮ.
ದಿನಾಂಕ 5/3/2020 ರಂದು ನಿಮ್ಮ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸ್ತ್ರೀ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ರಾಜೇಶ್ವರಿ ಹುಲ್ಲೇನಹಳ್ಳಿಯವರು ಆಗಮಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಮಕ್ಕಳ ಮೇಲಿನ ತಾತ್ಸಾರ ಮನೋಭಾವವನ್ನು ಕುರಿತು ಸಂಸ್ಥೆಯ ಸಿಬ್ಬಂಧಿಗಳು ಕಿರುನಾಟಕವನ್ನು ಪ್ರದರ್ಶಿಸದರು. ಸಂಸ್ಥೆಯ ಮಾನಸಿಕ ವೈದ್ಯೆ ಡಾ ಸುನೀತಾ ಕಿರುನಾಟಕವನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀಮತಿ ರಾಜೇಶ್ವರಿ ಹುಲ್ಲೇನಹಳ್ಳಿಯವರು ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯ ಪಾತ್ರ, ಆಧುನಿಕ ಮಹಿಳೆಯ ಭಿನ್ನತೆ ಮತ್ತು ಸಮಾಜ ಮಹಿಳೆಯ ಮೇಲೆ ಹೇಗೆ ಅವಲಂಬಿತವಾಗಿದೆ ಎಂಬುದನ್ನು ತಿಳಿಸಿಕೊಟ್ಟರು.
ಸೀಮಂತ ಕಾರ್ಯಕ್ರಮ : ವಿಶೇಷವಾಗಿ ಸಂಸ್ಥೆಯಲ್ಲಿ ಹಾಜರಿದ್ದ ಗರ್ಭಿಣಿಯರಿಗೆ ಸೀಮಂತ ಕಾರ್ಯ ನೆರವೇರಿಸಿಕೊಟ್ಟಿದ್ದು ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು. ಮಹಿಳೆಯ ತಾಯ್ತನವನ್ನು ಸಂಭ್ರಮಿಸಿ, “ತಾಯಿ” ಎಂಬ ಉನ್ನತ ಪದವಿಗೇರುತ್ತಿರುವ ಸಲುವಾಗಿ ಶುಭ ಹಾರೈಸುವ ಗುರುತಾಗಿ ಸೀಮಂತ ಕಾರ್ಯ ನಡೆಸಿದ್ದು ಸಾಂಪ್ರದಾಯಿಕವಾಗಿ ಹೂವು, ಹಣ್ಣು, ಹರಿಶಿನ, ಕುಂಕುಮ, ಬಳೆ ಮತ್ತು ಹೊಸ ವಸ್ತ್ರವನ್ನು ನೀಡುವುದರೊಂದಿಗೆ ಶಾಸ್ತ್ರಬದ್ದವಾಗಿ ಸೀಮಂತ ಕಾರ್ಯ ನಡೆಸಿಕೊಡಲಾಯಿತು.
ಸುಮಾರು 20 ಗರ್ಭಿಣಿಯರು ಈ ಕಾರ್ಯಕ್ರಮದಲ್ಲಿ ಭಾಗಯಾಗಿದ್ದು ಈ ಸಂಸ್ಥೆಯು ವೈದ್ಯಕೀಯ ಸೇವೆಯನ್ನಷ್ಟೇ ಅಲ್ಲದೇ ಈ ರೀತಿಯ ಕೌಟುಂಬಿಕ ಜವಾಬ್ದಾರಿಯ ಕಾರ್ಯಗಳನ್ನು ಏರ್ಪಡಿಸಿರುವುದು ಸಹಜವಾಗಿ ಆತಂಕದಲ್ಲಿರುವ ಗರ್ಭಿಣಿಯ ಮನಸ್ಸಿಗೆ ಒಂದು ರೀತಿಯ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ ಹಾಗೂ ಈ ರೀತಿಯ ಕಾರ್ಯಕ್ರಮಗಳು ಅತ್ಯಂತ ಭಾವನಾತ್ಮಕವಾಗಿ ಸಂತೋಷವನ್ನು ನೀಡುತ್ತವೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗೌರವಾನ್ವಿತರಾಗಿ ಹಾಜರಿದ್ದ ಡಾ ಗುರುಬಸವರಾಜ್ ರವರು ಮಾತನಾಡಿ ಗರ್ಭಿಣಿಯರಲ್ಲಿ ಮತ್ತು ಸಾಮಾನ್ಯರಲ್ಲಿ ಯೋಗಭ್ಯಾಸ, ಧ್ಯಾನ ಮತ್ತು ಆಧ್ಯಾತ್ಮ ಚಿಂತನೆಗಳು ಹೇಗೆ ಪರಿಣಾಮಕಾರಿಯಾಗಿ ಜೀವನವನ್ನು ಸಮತೋಲನದಲ್ಲಿರಿಸುತ್ತವೆ ಎಂದು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾ ಡಾ ಬಿ ಕೆ ಸೌಮ್ಯಮಣಿಯವರು ಕಾರ್ಯಕ್ರಮ ನಿರೂಪಿಸಿ ಸೃಷ್ಠಿಯಲ್ಲಿ ಹೆಣ್ಣಿನ ಮಹತ್ವವನ್ನು ತಿಳಿಸಿಕೊಟ್ಟರು. ಸಂಸ್ಥೆಯ ನಿರ್ದೇಶಕರಾದ ಡಾ ಜೆ ಕೆ ಯತೀಶ್ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ವರಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭ ಹಾರೈಸಿದರು. ಸಂಸ್ಥೆಯ ವೈದ್ಯರಾದ ಡಾ ದಿನೇಶ್ ಸ್ವಾಗತಿದರು, ಡಾ ಸುನೀತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು ಮತ್ತು ಡಾ ಬಿಂಬ ಶಶಿಕಿರಣ್ ವಂದಿಸಿದರು. ಇದೇ ಸಮಯದಲ್ಲಿ ಆಸ್ಪತ್ರೆಯ ಹಿರಿಯ ಮಹಿಳಾ ಸಿಬ್ಬಂಧಿ ಶ್ರಿಮತಿ ದಿನಮಣಿಯವರನ್ನು ಗೌರವಿಸಿ ಅವರನ್ನು ಪ್ರಶಂಸಿಸಲಾಯಿತು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ ಸಿದ್ದರಾಮು ಕೆ ಎಸ್, ಆಸ್ಪತ್ರೆಯ ಸಿಬ್ಬಂಧಿ ವರ್ಗ ಮತ್ತು ಸಾರ್ವಜನಿಕರು ಹಾಜರಿದ್ದರು.







Leave a Reply