Helping Activity Corona Times

Helping Activity Corona Times

ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಿಂದ ವಿಶೇಷ ರೀತಿಯಲ್ಲಿ ವಾರ್ಷಿಕೋತ್ಸವಾಚರಣೆ.

ಮಣಿ ಆಸ್ಪತ್ರೆ ಹಾಸನ ತನ್ನ 13ನೇ ವರ್ಷದ ವಾರ್ಷಿಕೋತ್ಸವದ ಹಂತದಲ್ಲಿದ್ದು ವಿಶೇಷ ರೀತಿಯಲ್ಲಿ ವಾರ್ಷಿಕೋತ್ಸವವನ್ನು ಆಚರಿಸಿದೆ. ಸಂಭ್ರಮಾಚರಣೆಯ ಬದಲಾಗಿ ದೇಶದಲ್ಲಿ ವ್ಯಾಪಿಸಿರುವ ಕೊರೋನಾ ಸೋಂಕು ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುವ ಬಗೆಯಲ್ಲಿ ತನ್ನ ವಾರ್ಷಿಕೋತ್ಸವಕ್ಕೆ ಒಂದು ಅರ್ಥ ನೀಡಿದೆ. ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಮತ್ತು ನಿರಾಶ್ರಿತರನ್ನು ಗುರುತಿಸಿ ಸುಮಾರು 100 ಕುಟುಂಬಗಳಿಗೆ ಅಗತ್ಯ ವಸ್ತುಗಳು ಮತ್ತು ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಹಾಸನ ಜಿಲ್ಲೆಯ ಕೋವಿಡ್ ಆಸ್ಪತ್ರೆ / ಹಿಮ್ಸ್ ಸಂಸ್ಥೆಗೆ 15 ಸ್ಯಾನಿಟೈಸರ್ ಸ್ಟ್ಯಾಂಡ್ ಮತ್ತು 300 ಫೇಸ್ ಗಾರ್ಡ್ ಗಳನ್ನು ಒದಗಿಸಲಾಯಿತು. ಸಾರ್ವಜನಿಕರಿಗೆ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಅರಿವು ಮೂಡಿಸಲಾಯಿತು. ಹೊಳೆನರಸಿಪುರ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯಕೀಯ ಸಿಬ್ಬಂಧಿಗಳಿಗೆ 4 ಸ್ಯಾನಿಟೈಸರ್ ಸ್ಟ್ಯಾಂಡ್ ಮತ್ತು 25 ಫೇಸ್ ಗಾರ್ಡ್ ಗಳನ್ನು ಉಚಿತವಾಗಿ ಒದಗಿಸಲಾಯಿತು. ಜಿಲ್ಲೆಯ ಆಶಾಕಾರ್ಯಕರ್ತೆಯರಿಗೆ ಉಚಿತವಾಗಿ ಫೇಸ್ ಗಾರ್ಡ್ ವಿತರಿಸುವ ಕಾರ್ಯ NGO’s ಜೊತೆಯಲ್ಲಿ ಪ್ರಾರಂಭವಾಗಿದ್ದು ಪ್ರಗತಿಯಲ್ಲಿದೆ. ಹೀಗೆ ಕೊರೊನಾ ವಿರುದ್ದದ ಹೋರಾಟದಲ್ಲಿ ಸಂಸ್ಥೆಯು ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿದೆ.

Leave a Reply

Your email address will not be published.